ನೋವು- ನಲಿವು
ಹೊಮ್ಮಿಸುವಷ್ಟು ಭಾವನೆ ನೋವು
ಹೊಮ್ಮಿಸದದೇಕೆ ನಲಿವು ?
ನೋವಿಗಿರುವಾಗ ಸುಧೀರ್ಘ ಉಳಿವು
ಅದೇಕೆ ನಲಿವಿಗೆ ತ್ವರಿತ ಅಳಿವು ?
ಪ್ರತಿ ಹ್ರದಯದಲ್ಲೂ ನೋವಿದೆ
ತೋರಿಸೊದರಲ್ಲಿ ಅಂತರವಿದೆ
ಮೂರ್ಖರು ಕಣ್ಣಲ್ಲಿ ಬಚ್ಚಿಟ್ಟರೆ
ಜಾಣ್ರು ಮುಗುಳ್ನಗುವಿನ ಹಿಂದೆ
ನೋವು
ಒಳಗೇ ಉಳಿದರೆ ನೋವು
ಬಾಯಲ್ಲಿ ಅಗಿದಂತೆ ಬೇವು
ಮನಸಿಗೂ ಖಾತ್ರಿ ಬಾವು
ಸಮೀಪ ಕರೆದಂತೆ ಸಾವು
No comments:
Post a Comment