Monday, 30 September 2013

ಪ್ರಚಲಿತ ವಿದ್ಯಮಾನ--------

ಲಾಲೂ ಚಲೇ ಜೇಲ್--------


ರಾಂಚಿಯ ಬಿರ್ಸಾ ಮುಂಡಾ ಕಾರಾಗೃಹದ ಹೆಸರು ನಾನು ಇಂದೇ ಕೇಳಿದ್ದು. .
ಇಲ್ಲಿ ಇಂದು ಆಗಮನವಾಯಿತು-ರಾಂಚಿ ನ್ಯಾಯಾಲದಿಂದ "ಪ್ರಸಾದ್" ಪಡೆದ ಲಾಲೂ ಪ್ರಸಾದ್ ಯಾದವ್ ಅವರದು.
ಅವರು ಇಲ್ಲಿ ಅತಿಥಿಯಾಗಿ ಬಂದಿರುವರು !
ಅಕ್ಟೋಬರ್ ೩ ರಂದು ಗೊತ್ತಾಗುವದು-ಇಲ್ಲಿ ಗರಿಷ್ಟ ೭ ವರ್ಷದ ವರೆಗೆ ಉಳಿಯುವರಾ ಇಲ್ಲಾ ಕನಿಷ್ಠ ೪ ವರ್ಷ ಇರುವರಾ ಅಂತ.
ಏನೇ ಆಗಲಿ ಲಾಲೂ ಯಾದವ್ ರ ರಾಜಕೀಯ ಜೀವನದ ಕೊನೆಯ ಪ್ರಾರಂಭ ಆಯಿತು ಅಂತ ಹೇಳಬಹುದೇ? 
ಈ ನುರಿತ ನರಿ ಬುದ್ಧಿಯ ರಾಜಕಾರಣಿಯನ್ನು ಅಷ್ಟು ಸರಳವಾಗಿ ಸಾರ್ವಜನಿಕ ಜೀವನದಿಂದ ಅಳಿಸಿ ಹಾಕಲಾಗುವದಿಲ್ಲ ಅಂತ ಹೇಳುವವರೂ ಇದ್ದಾರೆ.
ಭವಿಷ್ಯ ಇವರಿಗಾಗಿ ತನ್ನ ಗರ್ಭದಲ್ಲಿ ಏನು ಕಾಯ್ದಿಟ್ಟುಕೊಂಡಿದೆಯೋ ಸಮಯವೇ ಹೇಳಬೇಕು.

ಯಥಾ ಪ್ರಕಾರ ದಿಗ್ವಿಜಯಸಿಂಗ್ ತಮ್ಮ REPUTATION ಗೆ ತಕ್ಕ ಹಾಗೆ ಹೊಸ ವಿವಾದ ಮೆರೆದಿದ್ದಾರೆ. ಲಾಲೂ ದೋಷಿ ಅಂದು ತೀರ್ಮಾನವಾಗಿದ್ದು ಒಂದು ಪಿತೂರಿ ಅಂತೆ! ಅಯ್ಯಾ ದಿಗ್ಗಿ ರಾಜಾ ಇಲ್ಲಿ ಯಾರು ಪಿತೂರಿ ಮಾಡಲು ಸಾಧ್ಯ-ಸಿಬಿಐ ಕಾಂಗ್ರೆಸ್ ಕೈಯಲ್ಲಿದೆ. ಸಿಬಿಐ ಪಿತೂರಿ ಅಂದ್ರೆ ಇದು ಕಾಂಗ್ರೆಸ್ ಪಿತೂರಿ ಅಂತಲೇ ಆಗುವದಿಲ್ಲವೇ? ಅಂತಹ ಪಿತೂರಿಯ ದುರ್ವಾಸನೆ ಸ್ವಲ್ಪ ಸ್ವಲ್ಪ ನಮಗೂ ಬರ್ತಾನೂ ಇದೆ. ಅದಕ್ಕೇ ಇರಬೇಕು ನಿಮ್ಮ ಪಕ್ಷದ ಉಪಾಧ್ಯಕ್ಷರು ನಿಮ್ಮದೇ ಸರಕಾರ ರಾಷ್ಟ್ರಪತಿಗಳಿಗೆ ಕಳಿಸಿದ ಅಧ್ಯಾದೆಶವನ್ನು ಸಾರ್ವಜನಿಕವಾಗಿ ಅತ್ಯಂತ ನಾಟಕೀಯವಾಗಿ ' ಹರಿದು ಹಾಕಿ ಎಸೆಯಿರಿ' ಅಂತ ಹೇಳಿದ್ದು, ಅಲ್ಲವೇ? ಆ ಅರ್ಡಿನನ್ಸ್ ಗೆ ರಾಷ್ಟ್ರಪತಿಯವರ ಅನ್ಕಿತವಾಗಿದ್ದರೆ-ಲಾಲೂಗೆ ಸಂರಕ್ಷಣೆ ಸಿಗಬಹುದಿತ್ತು. ಈ ಬೆಳೆವಣಿಗೆ ನೋಡಿದರೆ ಕಾಂಗ್ರೆಸ್ ಲಾಲೂನ್ನ ದೂರ ಮಾಡಿ ಬಿಹಾರದಲ್ಲಿ ಹೊಸ ಮಿತ್ರಪಕ್ಷ (ನಿತೀಶ್ ಕುಮಾರರ ) ಹುಡುಕುತ್ತಿರಬಹುದಾ ಅನಿಸುವದರಲ್ಲಿ ಸುಲ್ಲಿರಲಿಕ್ಕಿಲ್ಲ. 

ಇಂದಿನ ಘಟನೆಗಳ ಒಂದು ಸಂಕ್ಷಿಪ್ತ ಅವಲೋಕನ ಹೀಗಿದೆ-
೧೭ ವರ್ಷಗಳ ಹಿಂದೆ ಇವರ ವಿರುದ್ಧ ಸಿಬಿಐ ಕೇಸ್ ದಾಖಲು ಮಾಡಿದರು 
ಆರೋಪ - ಅದಕ್ಕೂ ಹಿಂದಿನ ೨ದಶಕಗಳಲ್ಲಿ ೯೫೦ ಕೋಟಿಗಟ್ಟಲೆ ಹಣ ಸರ್ಕಾರಿ ಟ್ರೆಜರಿಯಿಂದ ಮೋಸದಿಂದ ತೆಗೆದು ಭ್ರಷ್ಟಾಚಾರ ಮಾಡಿದ್ದು.
ಆರೋಪಿ- ಲಾಲೂ ಮಾತ್ರ ಅಲ್ಲ ಮಾಜಿ ಬಿಹಾರ್ ಮಂತ್ರಿ ಜೆ ಏನ್ ಮಿಶ್ರಾ ಅಲ್ಲದೆ, ಇತರ ರಾಜಕಾರಣಿಗಳು ಹಾಗೂ ಅಧಿಕಾರಿಗಳೂ ಶಾಮೀಲು. 
ಸಿಬಿಐ ಕೇಸ್ ಹಾಕಿದ್ದು, ಇಲ್ಲಿಯವರೆಗೆ ಚಾರಾ ಘೋಟಾಲಾ ಕೇಸ್ಗಳಲ್ಲಿ ೯೦%ಕ್ಕೂ ಹೆಚ್ಚು ಆರೋಪಿಗಳನ್ನು ದೋಷಿಗಳೆಂದು ತೀರ್ಮಾನಿಸಲಾಗಿದೆಯೆಂದು ವರದಿ. worse times ahead for Laalu ?
ಇವತ್ತು ಲಾಲೂ ಜತೆ ಜೆಡಿ -U MP ಜಗದೀಶ್ ಶರ್ಮಾ, ೪ ರಾಜಕಾರಣಿಗಳು, ೧೨ ಬಾಬುಗಳು, ಹೀಗೆ ಒಟ್ಟು ೪೫ ಜನಗಳು ದೋಷಿಯೆಂದು ತೀರ್ಮಾನಿಸಲಾಗಿದೆ.
ಅಕ್ಟೋಬರ್ ೩ ರಂದು ಶಿಕ್ಷೆಯನ್ನು ಘೋಷಿಸಲಾಗುವದು.ಆದ್ರೆ ಲಾಲೂ ತಕ್ಷಣ ಜೇಲು ಪಾಲಾದರು ಹಾಗೂ ಅಲ್ಲಿಯ ಜೆಲರ್ ಹೇಳಿಕೆಯ ಪ್ರಕಾರ ಲಾಲೂಗೆ ವಿಶೇಷ ಸವಲತ್ತುಗಳನ್ನು ಒದಗಿಸಲಾಗಿಲ್ಲವಂತೆ. ನಮಗೆ ಈ ಮಾತು ನಂಬದೆ ಬೇರೆ ವಿಧಿ ಇಲ್ಲ.
ಸಧ್ಯಕ್ಕೆ-ಲಾಲೂ ಸಂಸತ್ ಸದಸ್ಯತ್ವ ರದ್ದು,ಮುಂದೆ ಚುನಾವಣಾ ಸ್ಪರ್ದಿಸಲಾರರು. 

೧೭ ವರ್ಷಳು ಜಾಸ್ತಿಯಾಗಲಿಲ್ಲವೇ ಈ ತೀರ್ಮಾನ ಬರಲು ಅಂತ ಸಹಜ ಪ್ರಶ್ನೆ ಏಳುವದು-ಆದರೆ ಏನು ಮಾಡೋದು -ನಮ್ಮ ನ್ಯಾಯಾಂಗ ವ್ಯವಸ್ಥೆಯೇ ಹೀಗೆ.ನಡುವೆ ರಾಜಕೀಯ ಹಸ್ತಕ್ಷೇಪ ಬೇರೆ. ಹಾಗೆಯೇ JUSTICE DELAYED IS JUSTICE DENIED ಅಂತಾರೆ . ಹಾಗೆಯೇ BETTER LATE THAN NEVER ಅಂತಲೂ ಹೇಳ್ತಾರೆ . ಏನು ಮಾಡೋದು ಈ ದೇಶದ ಜನತೆ ಏನೋ ಒಂದು ಅನ್ಕೊಂಡು ಸಮಾಧಾನ ಮಾಡಿಕೊಳ್ಳಲೇ ಬೇಕು ಅನ್ನುವ ವಿಷಮ ಪರಿಸ್ಥತಿ ದೇಶದಲ್ಲೀಗ.. 

ವಿಷಯದ ಬಗ್ಗೆ ಆಯಿತು ಇನ್ನು ವ್ಯಕ್ತಿಯ ಬಗ್ಗೆ ಸಂಕ್ಷಿಪ್ತ ಅವಲೋಕನ ಹೀಗಿದೆ-

ಲಾಲೂ ( ಜನ್ಮ ೧೧ ಜೂನ್ ೧೯೪೮)
ಪಟ್ನಾ ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ರಾಜಕೀಯ ಆರಂಗೆಟ್ರಂ! 
ಜೇಪೀ ಹಿಂಬಾಲಕರಾಗಿ ೧೯೭೭ ರಲ್ಲಿ ೨೯ ನೆ ವಯಸ್ಸಿನಲ್ಲಿ ಲೋಕ ಸಭಾ ಸದಸ್ಯತ್ವ.
ರಾಷ್ಟ್ರೀಯ ಜನತಾ ದಳ ದ ರಾಷ್ಟ್ರೀಯ ಅದ್ಯಕ್ಷ.೧೯೯೦-೧೯೯೭ ರ ವರೆಗೆ ಬಿಹಾರದ ಮುಖ್ಯ ಮಂತ್ರಿ.
FODDER SCAM ನಲ್ಲಿ ಚಾರ್ಜ್ ಶೀಟ್ ಮಾಡಿದ್ದಕ್ಕೆ ೯೭ ರಲ್ಲಿ ಮುಖ್ಯ ಮಂತ್ರಿ ಪದವಿಯಿಂದ ರಾಜೀನಾಮೆ
ಆದರೆ ಪಕ್ಕಾ ವಂಶವಾದಿ ಈ ರಾಜಕಾರಣಿ ಮಾಡಿದ್ದೇನು ಗೊತ್ತಾ - ಅಧಿಕಾರ ತಮ್ಮ ಪತ್ನಿಗೆ ಹಸ್ತಾಂತರಿಸಿ - ರಿಮೋಟ್ ಕಂಟ್ರೋಲ್ ದಿಂದ ರಾಜ್ಯಭಾರ ಮಾಡಿದರು. ವಂಶವಾದ ಪಾಲಿಸುವ ಗಾಂಧೀ ಪರಿವಾರದ ಜತೆ ಅತ್ಯಂತ ಸೌಂಹಾರ್ದಯುತ ಸಂಬಂಧ ರಾಜಕೀಯವಾಗಿಯೂ ಬೆಳೆಸಿ ಕೊಂಡರು.Birds of same feather flock together !
ಇವರ ಟೀಕಾಕಾರರು-ವಿರೋಧಿಗಳು ಇವರ ಬಿಹಾರ್ರಾಜ್ಯಭಾರದ ದಿನಗಳನ್ನು-ಕಾನೂನಿಲ್ಲದ ಜಂಗಲ್ ರಾಜ್ಯ ಅಂತ ವರ್ಣಿಸುತ್ತಿದ್ದರು.
೨೦೦೪-೨೦೦೯ ರ ವರೆಗೆ UPA -೧ ಸರಕಾರದಲ್ಲಿ ರೇಲ್ವೆ ಮಂತ್ರಿಯಾಗಿದ್ದರು. ಈಗ ನಮ್ಮ ರಾಜ್ಯ ಸೇರಿ ಎಲ್ಲ ಕಡೆ ರೇಲ್ವೆ ಯಲ್ಲಿ ಬಿಹಾರಿಗಳು ತುಂಬಿದ್ದರೆ ಅದಕ್ಕೆ ಕಾರಣ ಇವರ ಆ ಅಧಿಕಾರ.
ಸಧ್ಯಕ್ಕೆ ೧೫ ನೆ ಲೋಕ ಸಭೆಯಲ್ಲಿ ಸದಸ್ಯರಿದ್ದು ಮಂತ್ರಿ ಪದವಿ ಇಲ್ಲ.
ಮಂಡಲೀಕರಣದ ಅಗ್ರಗಣ್ಯ ರೂವಾರಿ ಇವರು, ಸೆಕ್ಯುಲರ್ ಹಣೆಪಟ್ಟಿ ಇಟ್ಟುಕೊಂಡು ಸೂಡೋ-ಸೆಕ್ಯುಲರ್ ರಾಜಕಾರಣದಲ್ಲಿ ನಿಪುಣ. ಇವರ ವೋಟ್ ಬ್ಯಾಂಕ್ ಗೆ MY ಅಂತ ಚುಟಕಾಗಿ ಹೆಸರು-ಮುಸ್ಲಿಂ-ಯಾದವ್.
ನಿತೀಶ್ ಕುಮಾರ್ ಇವರನ್ನು ಇವರದೇ ಜಾತೀಯ-ರಾಜಕಾರಣದಲ್ಲಿ, ಬಿಜೆಪಿ ಸೇರಿ ಸೋಲಿಸಿ , ಈಗ ಬಿಹಾರದ ಮುಖ್ಯ ಮಂತ್ರಿ.ಈಗ ನಿತೀಶ್ ಬಿಜೆಪಿ ಕೈ ಬಿಟ್ಟಾಗಿದೆ ಕಾಂಗ್ರೆಸ್ ಕೈ ಹಿಡಿಯುವ ತಯಾರಿ. 
ಬಿಹಾರವನ್ನು ಪುನಃ ತಮ್ಮ ಕೈವಶ ಮಾಡಿಕೊಳ್ಳಬೇಕೆಂದು ಒಂದೇ ಸಮನೆ ತಿಣಕುತ್ತಿದ್ದರು ಲಾಲೂ-ಒಂದು ಸಮಯದ ವೈರಿ ಪಾಸ್ವಾನ್ ಜತೆ ಕೈ ಜೋಡಿಸಿ ಇನ್ನೂ ಸಫಲತೆಗಾಗಿ ಕಾಯುತ್ತಿರುವಾಗಲೇ ರಾಂಚಿ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು ಒಂದು ಬಾಂಬ್ ಶೆಲ್ ತರಹಾನೇ ಇವರ ರಾಜಕೀಯ ಭವಿಷ್ಯಕ್ಕೆ.
ಜಾದೂಗಾರ ಲಾಲೂ ಪತ್ನಿಗೆ ಅಧಿಕಾರ ಕೊಡ್ತಾರೋ ಇಲ್ಲಾ ಮಗ ತೇಜಸ್ವಿಗೆ ಕೊಡ್ತಾರೋ ಕಾದು ನೋಡಬೇಕು.
ಅತ್ಯಂತ ಕುಶಲ-ತೀಕ್ಷ್ಣ (ನರಿ)ಬುದ್ಧಿ ಹೊಂದಿದ ಈ ರಾಜಕಾರಣಿ ಹೊರನೋಟಕ್ಕೆ ಹುಚ್ಚು ಗಮಾರನಂತೆ ಕಾಣುತ್ತ ತನ್ನ ಕಾರ್ಯ ಸಾಧಿಸುತ್ತ ಬಂದಾತ. ವಕ್ರ ಜೋಕ್ ಮಾಡೋದರಲ್ಲಿ ನಿಸ್ಸೀಮ.
ಇವರನ್ನೊಮ್ಮೆ ಯಾರೋ ಕೇಳಿದರಂತೆ -ಲಾಲೂಜಿ ದೇಶದ ಜನಸಂಖ್ಯಾ ಸ್ಫೋಟ ನೋಡಿಯೂ ನೀವು ಇಷ್ಟು ಮಕ್ಕಳನ್ನು ಹೆತ್ತಿದ್ದೇಕೆ? ಟಿಪಿಕಲ್ ಲಾಲೂ ಉತ್ತರ-"ನೋಡಿ ನಾನು ವಿರೋಧ ಪಕ್ಷದಲ್ಲಿದ್ದೆ. ಸರಕಾರದ ಎಲ್ಲ ನೀತಿಗಳನ್ನು ವಿರೋಧ ಮಾಡುತ್ತಿದ್ದೆ. ಕುಟುಂಬ ನಿಯೋಜನೆ ಕೂಡ ಒಂದು ಸರಕಾರೀ ನೀತಿ ಆಗಿದ್ದು -ಅದನ್ನೂ ವಿರೋಧಿಸುತ್ತ ನಾವು ಇಷ್ಟು ಮಕ್ಕಳನ್ನು ಪಡೆದೆವು"!
ಇಂಥ ಉತ್ತರ ಕೇಳಿ ನಗಬೇಕಾ ಅಳಬೇಕಾ ?

Sunday, 29 September 2013

೧೯೬೨ ಭಾರತ ಚೀನಾ ಯುದ್ಧ -ನೆಹರು ಅವಿವೇಕ------

ನಿನ್ನೆ ಟೀವೀ ಯಲ್ಲಿ "ದಾಸ್ತಾನೆ ಜಂಗ್" ( ಯುದ್ಧದ ಕತೆಗಳು) ಅನ್ನೋ ಕಾರ್ಯಕ್ರಮ ಆಜ್ ತಕ್ ವಾಹಿನಿಯಲ್ಲಿ ಸ್ವಲ್ಪ ಸಮಯ ನೋಡಿದೆ. 
ನಿನ್ನೆಯ ಕಥೆ ೧೯೬೨ ಭಾರತ ಚೀನಾ ಯುದ್ಧ 
ಅದೇ ಪ್ರೇರಣೆ ಈ ಲೇಖನಕ್ಕೆ.

೧೯೬೨ ಭಾರತ ಚೀನಾ ಯುದ್ಧ - ಮುಂದಾಲೋಚನೆಯಿಲ್ಲದ, ಅಧಿಕಾರದ ಮದದಿಂದ ಮತ್ತರಾದ ನಮ್ಮ ರಾಜಕೀಯ ನಾಯಕರು - ಮುಖ್ಯತಹ ಪ್ರಧಾನಿ ನೆಹರು (ಹಾಗೂ ರಕ್ಷಾ ಮಂತ್ರಿ ಮೆನನ್) -ಮಾಡಿದ ಘೋರ ಹಾಗೂ ಅಕ್ಷ್ಯಮ್ಯ ದೇಶದ್ರೋಹಿ ಅಪರಾಧ.
ಯುದ್ಧಕ್ಕೆ ತಯಾರೀ ಇಲ್ಲ ಅಂತ ಆರ್ಮಿ ಹೇಳಿದರೂ ಕೂಡಾ ತಮ್ಮ ಅಹಂ ಸಲುವಾಗಿ ಏನೂ ಸರಿಯಾದ ಸಾಮಾನು ಸರಂಜಾಮು,ಶಸ್ತ್ರಾಸ್ತ್ರ, ಮದ್ದು ಗುಂಡು, ಟೆಂಟ್-ವುಲನ್ ಬಟ್ಟೆ, socks-gloves ಇತ್ಯಾದಿಗಳ ಸಜ್ಜಿಲ್ಲದೇ ಸೇನೆಯನ್ನು ಸಾವಿನ ದವಡೆಗಳಲ್ಲಿ ನೂಕಿದರು. 
ಸೈನಿಕರಿರುವದೆ ಸಾಯಲು ಅಂತ ಈಗ ಒಬ್ಬ ಬಿಹಾರಿ ರಾಜಕಾರಣಿ ಹೇಳಿಕೆ ಕೊಟ್ಟಿದ್ದಾನೆ.
ಆದರೆ ೧೯೬೨ ರಲ್ಲಿ ಒಬ್ಬ ಅವಿವೇಕಿ ಕಾಶ್ಮೀರಿ ರಾಜಕಾರಣಿ ಅದನ್ನು ಆಗಲೇ ಮಾಡಿ ತೋರಿಸಿದ್ದ !
ನಿಮಗೆ ಗೊತ್ತಾ-ಈ ಯುದ್ಧದಲ್ಲಿ ನಮ್ಮ ಸೈನಿಕರ ಹತ್ರ ೧೯೧೩ ರ ಪ್ರಥಮ ವಿಶ್ವ ಯುದ್ಧದ ಸಮಯದ ರೈಫಲ್ ಇದ್ದವು ! 
ಚೀನಾ ಬಿಡಿ, ಆಗ ಪಾಕಿಸ್ತಾನದ ಹತ್ತಿರ ಕೂಡಾ ಆಟೋಮೆಟಿಕ್ ರೈಫಲ್ ಇದ್ದವು. 
ಗಡಿ ಅಲ್ಲಿಯ ಮೈ ಕೊರೆಯುವ ಅತ್ಯಂತ ಚಳಿಯಲ್ಲಿ - ಹಿಮದಲ್ಲಿ ನಮ್ಮ ಸೈನಿಕರಿಗೆ ಕಾಟನ್ ಯುನಿಫಾರ್ಮ್ ಹಾಗೂ ಕ್ಯಾನವಾಸ್ ಶೂ ಮಾತ್ರ ಕೊಡಲಾಗಿತ್ತು. ಹಿಮ-ಚಳಿಯ ಪರಿಣಾಮದಿಂದಾಗಿ ಹೆಚ್ಚಿನ ಸಾವು-ನೋವುಗಳಾದವು.
ನಮ್ಮ ಹೆಚ್ಚಿನಂಶ ಸೈನಿಕರು ಸತ್ತಿದ್ದು ಚೀನೀ ಗುಂಡುಗಳಿಂದಲ್ಲ-ಹಿಮ-ಚಳಿಯ ಪರಿಣಾಮದಿಂದಾಗಿ ! 
ಯಾರು ಸಾಯಲಿಲ್ಲವೋ ಹೆಚ್ಚಿನವರಿಗೆ ಚಿಲ್ ಬ್ಲೆನ್ಸ್ / ಫ್ರಾಸ್ಟ್ ಬೈಟ್ ಗಳಾಗಿ ಹೆಚ್ಚೇನೂ ಮಾಡಲಾಗದ ಸ್ಥಿತಿಯಲ್ಲಿದ್ದರು. 
ನೆಹರು ಅವರ ಅವಿವೇಕದ-ಪಕ್ಷಪಾತಿ ನೀತಿಯ ಅನೇಕ ಉದಾಹರಣೆಗಳಲ್ಲಿ -ಇಲ್ಲೊಂದು ನೋಡಿ-
ಯುದ್ಧದಲ್ಲಿ ಕಮಾಂಡರ್ ಆಗಿ ನೇಮಿಸೋದು-ಫೈಟಿಂಗ್ ಆರ್ಮ್ಸ್ ನ ಅಧಿಕಾರಿಗಳನ್ನು. ಆದರೆ ನೆಹರು ನೇಮಿಸಿದ್ದು ತಮ್ಮಂತೆ ಕಾಶ್ಮೀರಿಯಾಗಿದ್ದ ಜನರಲ್ ಕೌಲ್ ಅವರನ್ನು- ಜನರಲ್ ಕೌಲ್ ಫೈಟಿಂಗ್ ಆರ್ಮ್ಸ್ ನ ಅಧಿಕಾರಿ ಯಾಗಿರಲಿಲ್ಲ-ಅವರು ಸರ್ವೀಸ್ ಕೋರ್ ಅಧಿಕಾರಿಯಾಗಿದ್ದು-ಅವರ ಅನುಭವ ಯುದ್ಧ ತಂತ್ರಗಳಲ್ಲಿರಲಿಲ್ಲ.ನೆಹರು ಅವರ ಕೈಯಾರೆ ಆಯ್ಕೆಯಾದ ಈ ಜನರಲ್ ಕೌಲ್ ಯುದ್ಧದ ಹೆಚ್ಚಿನ ಸಮಯ ದಿಲ್ಲಿಯಲ್ಲಿ ಅದೂ ಆಸ್ಪತ್ರೆ ಯಲ್ಲಿ ಕಳೆದರು ! ಅವರು ೭ ನೆಯ ಬ್ರಿಗೆಡಿನ ಬ್ರಿಗೇಡಿಯರ್ ದಳವಿಗೆ ಹೇಳಿದ್ದು-ಇನ್ನು ಮೇಲೆ ಈ ಯುದ್ಧ ನಿನ್ನದು-ಏನು ಮಾಡ್ತೀಯ ಮಾಡು.
ಇಂಥ ಅವಿವೇಕಿ ನಾಯಕರು-ಅವರ ಆಯ್ಕೆ ಜನರಲ್ ಕಾರಣದಿಂದಾಗಿ ಶೌರ್ಯದಿಂದ ಹೋರಾಡಿದರೂ ಯುದ್ಧದಲ್ಲಿ ಅನಾವಶ್ಯಕವಾಗಿ ಸಾವಿರಾರು ಸೈನಿಕರು ಮಡಿದರು. ಅನೇಕರು ಚೀನೀಯರ ಸೆರೆಯಾಳಾಗಿ ಸಿಕ್ಕುಬಿದ್ದರು-ಅವರಲ್ಲಿ ಬ್ರಿಗೇಡಿಯರ್ ದಳವಿ ಕೂಡ ಒಬ್ಬರು. ವರ್ಷಗಳ ನಂತರ ಬಿಡುಗಡೆಯಾದ ಮೇಲೆ ಅವರು ಬರೆದ ಪುಸ್ತಕವೇ -ದಿ ಹಿಮಾಲಯನ್ ಬ್ಲಂಡರ್. ಇದ್ದಲ್ಲದೆ ಬಂದ ಎಲ್ಲ ಇತರ ಪುಸ್ತಕಗಳಲ್ಲಿ ನೆಹರು ನೀತಿಯನ್ನು ಆ ಯುದ್ಧದಲ್ಲಾದ ಮುಖಭಂಗಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.
ಹಾಗೆ ನೋಡಿದರೆ ನೆಹರು ಅವರನ್ನು ಸಾವಿರಾರು ಸೈನಿಕರ ಅನವಶ್ಯಕ ಸಾವು-ನೊವುಗಳ ಕಾರಣೀಕರ್ತ ಅನ್ನೋ ಯುದ್ಧಾಪರಾಧಕ್ಕೆ ನ್ಯಾಯಾಲಯದಲ್ಲಿ ನಿಲ್ಲಿಸ ಬೇಕಿತ್ತು, ಶಿಕ್ಷೆ ಕೊಡಬೇಕಿತ್ತು.
ಆದರೆ ನಮ್ಮ ದೇಶದಲ್ಲಿ ಪದವಿ-ಕುಟುಂಬ ನೋಡಿ ಅವರ ಮೇಲೆ ಕ್ರಮ-ನೆಹರು ಕುಟುಂಬಕ್ಕೆ ಇದರಿಂದ ವಿನಾಯತಿ-ಹಾಗೆ ನೋಡಿದರೆ ಇಂದಿರಾ ಗಾಂಧಿಯನ್ನು ಎಮರ್ಜೆನ್ಸಿ ಹೇರಿದ್ದಕ್ಕೆ ಜೀವಾವಧಿ ಕಾರಾಗೃಹದಲ್ಲಿ ಇಡಬೇಕಿತ್ತು ಹಾಗೂ ಚುನಾವಣೆಗೆ ಅನರ್ಹ ಮಾಡಬೇಕಿತ್ತು.
ವಂಶವಾದದ ವ್ಯಾಧಿ ಆಗಿನಿಂದ ಶುರು ಆಗಿ ಈಗ ಅಸಹ್ಯ ಮಟ್ಟಕ್ಕೆ ಬಂದು ಮುಟ್ಟಿದೆ-ಇದಕ್ಕೆ ಒಂದೇ ಮಾರ್ಗ, ಉಪಾಯ -ಇವರನ್ನು ಮಟ್ಟ ಹಾಕಬೇಕು.
ನೆಹರುರ ಸಮಯದಿಂದ ಬಂದ ಇನ್ನೊಂದು ವ್ಯಾಧಿ -ಸೈನ್ಯವನ್ನು ಉಪೇಕ್ಷೆ ಮಾಡುವದು-ಅದು ಕೂಡ ಯಾವ ಗಂಭೀರ ಮಟ್ಟ ಮುಟ್ಟಿದೆ ಎಂದರೆ -ಕೇಳಬೇಕೆಂದರೆ ಪ್ರಧಾನಿ-ಅಂತೋನಿ ಇಬ್ಬರೂ ಬಾಯಿ ತೆಗೆಯೋಲ್ಲ - ತೆಗೆದರೆ ಸುಳ್ಳು ಹೇಳ್ತಾರೆ.
ಕೊನೆಯದಾಗಿ ವಾಸುಕಿ ಎಹ್ ಎ ಅವರ ಇಂದಿನ(೩೦-೯-೧೩) ಕನ್ನಡಪ್ರಭದ ಲ್ಲಿಯ ಅಂಕಣದಲ್ಲಿ ಬರೆದ ಲೇಖನದ ಕೆಲವು ಸಾಲುಗಳನ್ನು ಉಲ್ಲೇಖಿಸುವೆ- 
'ನೆಹರು ಅವರ ಅವಿವೇಕದ ಫಲವಾಗಿ ಚೀನಾ ಕೈಯಲ್ಲಿ ನಾವು ಮುಖಭಂಗ ಅನುಭವಿಸಿದಾಗ ಫೀಲ್ಡ್ ಮಾರ್ಷಲ್ ಕಾರಿಯಪ್ಪನವರು - "ಸಾವರ್ಕರ್ ಅವರ ಸಲಹೆಯಂತೆ ಭಾರತವು ತನ್ನ ಸೈನ್ಯಪಡೆಯನ್ನು ಸಜ್ಜುಗೊಳಿಸಿದ್ದರೆ ಈ ಅವಮಾನ ಆಗುತ್ತಿರಲಿಲ್ಲ" ಎಂದಿದ್ದರು.'
ನೃಪತುಂಗ ಬೆಟ್ಟದ ಮ್ಯಾಲ ಗಾಡಿ-ಗೋಳು 
-------------------------------
ನಾ ಹುಬ್ಬಳ್ಳಿಯಾಂವ ಇದ್ದ್ರೂ ಈಗ ಹುಬ್ಬಳ್ಳ್ಯಾಗ ಇರೂದಿಲ್ಲ.
ಹುಬ್ಬಳ್ಳಿಗ ಬಂದಾಗ ಮುಂಜಾನಿ ವಾಕಿಂಗ್ ಗ ನೃಪತುಂಗ ಬೆಟ್ಟಕ್ಕ ಅವಶ್ಯs ಹೋಗ್ತೀನಿ.
ಅಲ್ಲಿರ್ಬಾರದ ಗಾಡಿಗೋಳನ ನೋಡಿ ಮನಸೀಗ ಕಿರಿಕಿರಿ ಆಗ್ತದ.
ನೀರಿಂದು ಟ್ಯಾಂಕ್ ದಾಟಿದ್ ಕೂಡ್ಲೇನs, ಬೆಟ್ಟದ್ದ ಏರಿಕಿ ಶುರು ಆಗೊವಲ್ಲಿನs ಮುಂದ ಗಾಡಿ ಒಯ್ಯಬಾರ್ದು ಅಂತ ಬೋರ್ಡ್ ಅದ.
ವಾಕಿಂಗ್ ಬರೋರು ಮ್ಯಾಲಿನ್ ತನಕಾ ಗಾಡಿ ತರೊ ಅವಶ್ಯಕತಿಅರs ಎಲ್ಲದ?
ಇನ್ನೊಂದಿಷ್ಟ್ ಹೆಜ್ಜಿ ನಡದರ ಇನೂ ಜಾಸ್ತಿ ಆರೋಗ್ಯಕ್ಕೆ ಛಲೋ ಅಲ್ಲsನ.
ಕಾಳಜಿ-ಪ್ರಜ್ಞೆ ಇರೋ ಹುಬ್ಬಳ್ಳಿ ಮಂದಿ-ಪೊಲೀಸರು ಈ ಕಡೆ ಚೂರು ಲಕ್ಷ ಕೊಡಲಿಕ್ಕೆ ಆಗ್ತದೇನs?.
ಸೋಜಿಗ ಅಂದ್ರಫೋಟುದಾಗ ಇರೋ ಇವೆರಡರಾಗ ಒಂದು ಅಟೋದ ಮ್ಯಾಲ ಬರ್ದದ -"ವರಟ" !-KA26 3112 . ಇದು ಯಾವಾಗಲೂ ಮ್ಯಾಲ ಇರ್ತಿದ್ದನ್ನ ನಾ ನೋಡೆನಿ.ಇಲ್ಲಿ ನೋಡ್ರಿ "ವರಟ" ನಿಗೊಂದ ಸಾಥಿ ಬ್ಯಾರೆ ಕೂಡೇದ.
ಮುಖ್ಯ ದ್ವಾರದಾಗನs ಒಳಗ ಯಾವೂ ಗಾಡಿ ಹೋಗಬಾರದು ಅಂತ ಬರದಿದ್ರೂ ಸಹ ಅಲ್ಲೇ ಒಂದು ಜೀಪ್ ಕಾಣ್ತದ. ಪೂರ್ತಿ ಮ್ಯಾಲ ದ್ವಿಚಕ್ರ ವಾಹನಾನೂ ನೋಡೆನಿ-KA 25 EH 8496.
ಎಲ್ಲಾ ಫೋಟೋ ಅವ ನನ್ನಕಡೆ.
"ನೃಪತುಂಗ ಬೆಟ್ಟ ಸ್ವರ್ಗದ ತುಣುಕು , ಮಾಡಬ್ಯಾಡ್ರಿ ಇದನ ಕೊಳಕು"
ಅಂತ ಮ್ಯಾಲ ಬರದ್ ಬೋರ್ಡ್ ಹಾಕ್ಯಾರ.
ನೋಡ್ರೆಪಾ, ಯಾರ್ಗೆರ-ಏನರ ಮಾಡ್ಲಿಕ್ಕ ಬರ್ತದೆನು.






ಜಗನ್ :
ಜಗನ್ಗೆ ಸಿಕ್ಕಾಯಿತು ಬೇಯಿಲು 
ಬೈರೆಡ್ಡಿಯಿಂದ ರಹಸ್ಯ ಬಯಲು 
ಅಗದಿದ್ದ್ರೆ ರಾಜಕೀಯ ಕೊಯ್ಲು 
ನೀ ಮರೆಯಾಗು ಬರ್ದು ಉಇಲು
ಕಾಮಾಲೆ ಕಣ್ಣು ----------------------------------------
ಅದೇಕೋ ಕೆಲವ್ರಿಂದ್ ಬಿಜೆಪಿ ಯಾವಾಗ್ಲೂ ಅಂಡರ್ ಸ್ಕಾನರ್ 
ಕಾಣೋದಿಲ್ಲವೇ ಇವ್ರಿಗೆ ತಪ್ಪು ಅಂಡರ್ ದ ಕಾಂಗ್ರೆಸ್ ಬ್ಯಾನರ್ 
ಕಾಣದ ತಪ್ಪಿವರ್ಗೆ ಪಪ್ಪು ಮಾತಾಡಿದ ಸಾವಿರ ಮಾತುಗಳಲಿ 
ಕಾಣುವಿವ್ರಿಗೆ ಮೋದಿ ಮಾತನಾಡದ, ಮಾಡದ ವಿಷಯಗಳಲಿ

Saturday, 28 September 2013

ಹಗರಣಗಳು-೩೦-೦೯-೧೩ -ಕನ್ನಡದ  ಕಂಪು- 


ನೋಡಿದರೆ ಕೆಂದ್ರದಲ್ಲದರ ಗಜ ಗಾತ್ರ 
ಯಾಕೋ ಇದನಿಸ್ತಿದೆ ಸ್ವಲ್ಪ ವಿಚಿತ್ರ 
ಎಡ್ಡಿಯದು ಒಂದ್ಸಣ್ಣಿರುವೆಯ ಪಾತ್ರ 
ಇದ್ನರಿಯಲು ಸಮಚಿತ್ತಬೇಕು ಮಾತ್ರ
ಶಹೀದ್ ಭಗತ್ ಸಿಂಗ್ ಜನ್ಮ ದಿನದ ಶುಭಾಶಯಗಳು-----28-09-2013


ನಾಮರ್ದಗಳೂ ಇಟ್ಕೊಂಡಿರ್ತಾರೆ ಹೆಸ್ರು ಸಿಂಗ್
ಹೆಸ್ರ್ಲಿ ಮಾತ್ರವಲ್ಲ ಈತ ನಿಜವಾಗಿಯೂ ಸಿಂಗ್
ಸ್ವತಂತ್ರ ಸಂಗ್ರಾಮದಲಿ ಇವನೊಬ್ಬ ಶೂರಸಿಂಹ 
ಕನಸಲೂ ಬ್ರಿಟೀಷರ ಪಾಲಿಗೆ ಆಗಿದ್ದ ನರಸಿಂಹ.

ಹೆಸ್ರ್ಲಿ ಮಾತ್ರವಲ್ಲ ಈತ ನಿಜವಾಗಿಯೂ ಭಗತ್.
ಸ್ವತಂತ್ರ ಭಾರತವೇ ಇವನ ಕನಸಿನ ಜಗತ್
ಭಾರತಾಂಬೆಯ ಮೇಲೆಯೇ ಇವಂದು ಎಲ್ಲ ಭಕ್ತಿ
ಅದಕ್ಕಾಗಿಯೆ ವ್ಯಯೀಸಿದ ತನ್ನೆಲ್ಲ ಸಮಯ ಶಕ್ತಿ 




--ಕೊನೆಗೆ ತನ್ನ ಪ್ರಾಣವನ್ನೂ ಬಲಿದಾನ ಮಾಡಿದ
ಈ ಕ್ರಾಂತಿಕಾರಿಗೆ, ಸದ್ಯದ ನೀಚ ಸರಕಾರವು
ಮರೆತರೂ, ಬನ್ನಿ ಅರ್ಪಿಸೋಣ ನಾವೆಲ್ಲರೂ ಕೂಡಿ
ಶ್ರದ್ಧಾ-ಭಕ್ತಿಪೂರ್ವಕ ನಮನಗಳು ಅವನ ಹುಟ್ಟು ಹಬ್ಬದ ದಿನದಂದು.
ಇಂಕಿಲಾಬ್ ಜಿಂದಾಬಾದ್
ವಂದೇ ಮಾತರಂ
ಜೈ ಹಿಂದ್.
೨೦೧೩ ದಶರಾ ಕನ್ನಡ ಸಮ್ಮೇಳನ -----


ಇವರೇ ಸಚಿವ ರೈ
ಚಿನ್ಹೆ ಇವರದು ಕೈ 
ಇಲ್ಲಿ ಸ್ವಾರ್ಥಕ್ಕೇ ಸೈ 
ಸಬಕುಚ್ ಚಲ್ತಾ ಹೈ! 

(INSPIRED BY CARTOON BY SATISH ACHARYA)
ಬೇಸರ ---

ಹುಟ್ಟಿದ್ದನಾದ್ರೂ ದಿನನಿತ್ಯದಂತೆಯೇ ನೇಸರ 
ಇಂದೇಕೋ ಅರಿಯೆ ಮನಸಿಗಾಗಿದೆ ಬೇಸರ 
ನಂಬಿದವರ್ ಹೀಗೊಮ್ಮೆಲೇ ಕೈ ಕೊಟ್ಟರೆಂದೇ
ನಂಬಿದವರ್ ಅನಿರಿಕ್ಷಿತ್ವಾಗಿ ಕೈ ಬಿಟ್ಟರೆಂದೇ
ಮನಸಿಗೆ ಹೀಗೇಕೇ ನೋಡ್ರಿ ಕಳವಳದ ಆವಸರ
ಸಹನೆ ಇರಲಿ ಮನವೇ ಈಗ್ಲೂ ಮೊದಲಾದ ಹಾಗೆ
ಇದೂ ಕೂಡ ತಾನಾಗೇ ಹರಿದ್ಹೋಗ್ಬಹುದು ಸರಸರ
ಆಶೆ ಇರಲಿ, ಎಲ್ಲದಕಿದೆ ಅಂತಾರೆ ಕೊನೆಗೆ ಪರಿಹಾರ

ರೌಲ್ ಅಪಸ್ವರ - ಪ್ರಧಾನಿ ಬೇಸರ

ಸುದ್ಧಿ- ಪ್ರಧಾನಿಯಿಂದ ಅಧಿನಾಯಕಿಗೆ ದೂರು
ನೋಡುವವರಿಗೆ ಈಗ ಕಾಣ್ತಿವೆ ದಾರಿ ಮೂರು 
ಬಿಟ್ಟರೂ ನೀವು ೭ ರೆಸ್ ಕೋರ್ಸ್ ರಸ್ತೆ ಸೂರು 
ಆತ್ಮಗೌರವ ಇಟ್ಕೊಂಡ್ರೆ ಕರೆಯುವದು ನಿಮ್ಮೂರು 
(ಪ್ರಜಾವಾಣಿಯಲ್ಲಿ ಪ್ರಕಾಶ್ ಅವರ ಕಾರ್ಟೂನ್)