Sunday, 3 August 2014

ಸ್ನೇಹ ದಿವಸ

ಸ್ನೇಹ ದಿವಸ:
ನನಗೆ ಈ ದಿವಸದ ಆಚರಣೆಯ ಬಗ್ಗೆ ಗೊತ್ತಾಗಿದ್ದು ಇತ್ತೀಚಿನ ವರ್ಷಗಳಲ್ಲಿ.
ನಮ್ಮ ದೇಶದಲ್ಲಿ ಇಂದು(ಆಗಸ್ಟ್ ತಿಂಗಳ ಮೊದಲ ರವಿವಾರ)
ವಿಶ್ವ ಸಂಸ್ಥೆ ಮಾನ್ಯತೆ ಕೊಟ್ಟದ್ದು ಜುಲೈ ೩೦ ಕ್ಕೆ, ವಿಶ್ವದಾದ್ಯಂತ ಆ ದಿನ ಸ್ನೇಹ ದಿವಸ ಅಂತ ಆಚರಿಸ್ತಾರೆ.ಹೀಗೇಕೆ ಅಂತ ನನಗೆ ಗೊತ್ತಿಲ್ಲ.
ಶುರು ಶುರುವಿನಲ್ಲಿ (ಅಂತರ್ಜಾಲದ ಅತ್ಯದ್ಭುತ ಸ್ಫೋಟಕ್ಕೂ ಮೊದಲು) ಮದರ್ಸ್ ಡೇ ,ಫಾದರ್ಸ್ ಡೇ, ಫ್ರೆಂಡ್ಶಿಪ್ ಡೇ ಇತ್ಯಾದಿ ಹೊಸ ಹೊಸ ದಿನಗಳ ಆಚರಣೆ ಪ್ರಾರಂಭಿಸಿದ್ದು ಅಂತರ್ ರಾಷ್ಟ್ರೀಯ ದೊಡ್ ಅಣ್ಣಗಳು (ಉದಾ-ಹಾಲ್ಮಾರ್ಕ್, ಅರ್ಚೀಜ್) ಅವರ ವ್ಯಾಪಾರೀ ಕುತಂತ್ರ /ಕುಯುಕ್ತಿ ಅಂತ ಆರೋಪಗಳೂ ಕೇಳಿ ಬಂದವು.
ಇವು ಸ್ವಲ್ಪ ಫಾರ್ಮಲ್ ಬೇರೆ ಅನಿಸ್ತಿದ್ದವು.
ಈಗ ಹೆಚ್ಚಾಗಿ ಎಲ್ಲ ಶುಭಾಶಯಗಳು ಅಂತರ್ಜಾಲದ ಮೂಲಕವೇ ಕೊಡು-ಕೊಳ್ಳೋದು ಆಗುವದರಿಂದ ಆರ್ಚೀಜ್, ಹಾಲ್ಮಾರ್ಕ್ ಇತ್ಯಾದಿ ಅವರ ವ್ಯಾಪಾರ ಕುಗ್ಗಿರಬಹುದೇನೋ?
ಏನೇ ಇರಲಿ ಒಂದು ಸ್ವಾರ್ಥಕ್ಕೆ ಇಂಥ ಆಚರಣೆಗಳು ಶುರು ಆದವು ಅಂತಂದ್ರೂ ಇವು ಸಮಾಜಕ್ಕೆ ಧನಾತ್ಮಕ ಬೆಳವಣಿಗೆಗಳು ಆಗಿ ಹೊರಹೊಮ್ಮಿವೆ ಅಂತ ನನ್ನ ನಂಬಿಕೆ-ಈ ದಿನಗಳು ಏನೋ ಒಳ್ಳೆಯದನ್ನು ನೆನಪಿಸಿಕೊಡುವ ಹೊಸ ಸಾಧನಗಳಾಗಿವೆ.
(ಕ್ಷಮೆ ಇರಲಿ-ವ್ಯಾಲೆಂಟೈನ ಡೇ ವಿಷಯಕ್ಕೆ ಹೀಗೆ ಹೇಳಲು ಆಗುವದಿಲ್ಲ ಅನ್ನುವಷ್ಟು "ಹಳಬ" ನಾನು !).
ಸ್ನೇಹ ದಿವಸದಂದು ಎಲ್ಲರಿಗೂ ಹಾರ್ದಿಕ ಶುಭಾಶಯಗಳು ಹಾಗೂ ಅಭಿನಂದನೆಗಳು.

Sunday, 27 July 2014

ಇಂದು ಏಳನೆಯ ವಿಶ್ವ ಹೆಪಟೈಟಿಸ್ ದಿನ.

ಇಂದು ಏಳನೆಯ ವಿಶ್ವ ಹೆಪಟೈಟಿಸ್ ದಿನ.
ಒಂದು ವರದಿಯ ಪ್ರಕಾರ ಭಾರತದಲ್ಲಿ ೪ ಕೋಟಿ ಹೆಪಟೈಟಿಸ್ ರೋಗಿಗಳಿದ್ದಾರೆ.
ಹೆಪಟೈಟಿಸ್ ಸಂಭವನೀಯ ಮಾರಣಾನ್ತಕ ರೋಗ. ಆದ್ರೆ ಯಾವುದೇ ರೋಗ ಲಕ್ಷಣಗಳಿರಬೇಕೆಂದಿಲ್ಲ.

ಈ ದಿನದ "ಆಚರಣೆ"ಯ ಉದ್ದೇಶ- ರೋಗದ ಬಗ್ಗೆ ಸಾರ್ವತ್ರಿಕ ಅರಿವು ಹೆಚ್ಚಿಸುವದು, ಅದನ್ನು ತಡೆಗಟ್ಟುವ, ಪತ್ತೆ ಹಚ್ಚುವ ಹಾಗೂ ಉಪಚಾರದ ಬಗ್ಗೆ ಜನರಿಗೆ ತಿಳಿವಳಿಕೆ ಕೊಡುವದು.
ಸಂಕ್ಷಿಪ್ತ ತಿಳುವಳಿಕೆ ಕೆಳಗಡೆ ಕೊಡಲಾಗಿದೆ.

ಹೆಪಟೈಟಿಸ್ ನಿಂದ ಲಿವರ್ ಗೆ ಲುಕ್ಸಾನು ಆಗಬಹುದು ಅಥವಾ ಅದಕ್ಕೆ ಕ್ಯಾನ್ಸರ್ ಆಗಬಹುದು.
ತಿಳಿದಿರಲಿ-ಹೆಪಟೈಟಿಸ್ B ವೈರಸ್, (ಏಡ್ಸ್ ಗೆ ಕಾರಣವಾಗುವ ವೈರಸ್-) HIV ಗಿಂತ ನೂರು ಪಟ್ಟು ಹೆಚ್ಚು ಸಾಂಕ್ರಾಮಿಕ !

ಹೆಪಟೈಟಿಸ್ A ಹಾಗೂ E ಗಳಿಂದ ಹೀಗೆ ರಕ್ಷಣೆ ಪಡೆಯಬಹುದು:-
-ಅಡಿಗೆ/ಊಟ ಮಾಡುವ ಮೊದಲು ಹಾಗೂ ಶೌಚದ ನಂತರ ಕೈ ತೊಳೆಯಬೇಕು.
-ಸಾಧ್ಯವಿದ್ದಷ್ಟು ಆಗಲೇ ಮಾಡಿದ ಅಡಿಗೆ ಊಟ ಮಾಡಬೇಕು.
-ಸ್ವಚ್ಛ ಇಲ್ಲದ, ಮುಚ್ಚಿ ಇಡದ ಕಚ್ಚಾ ತರಕಾರಿ ಹಾಗೂ ಸುಲಿದ ಹಣ್ಣುಗಳನ್ನು ತಿನ್ನಬಾರದು.
-ಶುದ್ಧ ನೀರು ಕುಡಿಯಬೇಕು.
-ಹೆಪಟೈಟಿಸ್ A ವಿರುದ್ಧ ನಿರೋಧಕ ಚುಚ್ಚುಮದ್ದು ಪಡೆಯಬೇಕು ಆದರೆ ಇದು ಹೆಪಟೈಟಿಸ್   E ಯನ್ನು ನಿರೋಧಿಸುವದಿಲ್ಲ.

ಹೆಪಟೈಟಿಸ್ B  ಹಾಗೂ C ಗಳಿಂದ ಹೀಗೆ ರಕ್ಷಣೆ ಪಡೆಯಬಹುದು:-
-ಹೆಪಟೈಟಿಸ್ Bವಿರುದ್ಧ ನಿರೋಧಕ ಚುಚ್ಚುಮದ್ದು ಪಡೆಯಬೇಕು ಆದರೆ ಇದು ಹೆಪಟೈಟಿಸ್ C ಯನ್ನು ನಿರೋಧಿಸುವದಿಲ್ಲ.
-ಅಸುರಕ್ಷಿತ ಸಂಭೋಗದಿಂದ ದೂರ ಇರಬೇಕು.
-ಟೂತ್ ಬ್ರಷ್, ರೇಜರ್, ನೈಲ್-ಕಟರ್ ಹಂಚಿಕೊಳ್ಳಬಾರದು.
-ಟಾಟೂ ಮಾಡಿಸಿಕೊಳ್ಳುವಾಗ ಅಥವಾ ಮೂಗು/ಕಿವಿ ಇತ್ಯಾದಿ ಕಡೆ ಚುಚ್ಚಿಸಿಕೊಳ್ಳುವಾಗ ಆ ಉಪಕರಣಗಳನ್ನು ಮೊದಲೇ ಸರಿಯಾಗಿ ಸ್ಟರ್ಲೈಜ್ ಮಾಡಿದ್ದನ್ನು ಖಚಿತ ಪಡಿಸಿಕೊಳ್ಳಬೇಕು.
-ಡ್ರಗ್ಸ್,ಸೂಜಿಗಳು,ಸಿರಿಂಜ್ ಗಳನ್ನು ಹಂಚಿಕೊಳ್ಳಬಾರದು.

ಹೆಪಟೈಟಿಸ್ ಉಪಚಾರ-
-ಹೆಪಟೈಟಿಸ್ A ಹಾಗೂ E ಗಳಿಗೆ ಔಷದಿಯಿಲ್ಲ. ಲಕ್ಷಣಗಳನ್ನು ಹಾಗೂ ಏನಾದರೂ ಜಟಿಲತೆ ಆದಾಗ ಅವಕ್ಕೆ ಉಪಚಾರ ಕೊಡಬೇಕು.
-ಹೆಪಟೈಟಿಸ್ B ಯನ್ನು ಕ್ಯೂರ್ ಮಾಡಲು ಸಾಧ್ಯವಿಲ್ಲ. ಕ್ರಾನಿಕ್ ಹೆಪಟೈಟಿಸ್ B ಯನ್ನು ಇಂಟರ್ಫೆರೋನ್ ಹಾಗೂ ವೈರಸ್-ವಿರೋಧಿ ಔಷಧಿಗಳಿಂದ ಉಪಚರಿಸಬಹುದು.
-ಹೆಪಟೈಟಿಸ್ C ಯನ್ನು ಉಪಚರಿಸಲು ಔಷಧಿಗಳು ಲಭ್ಯ
ಎಲ್ಲ ಉಪಚಾರಗಳಲ್ಲಿ ರೋಗಿಯ ಸಾಮಾನ್ಯ ಸ್ಥಿತಿಯನ್ನು ಕಾಪಾಡಿಕೊಂಡು ಬರಬೇಕು.
(ಫೋಟೋ ಹಾಗೂ ರೆಫರೆನ್ಸ್ ಅಂತರ್ಜಾಲದಿಂದ)