Showing posts with label WORLD HEPATITIS DAY 14 JULY 2014. Show all posts
Showing posts with label WORLD HEPATITIS DAY 14 JULY 2014. Show all posts

Sunday, 27 July 2014

ಇಂದು ಏಳನೆಯ ವಿಶ್ವ ಹೆಪಟೈಟಿಸ್ ದಿನ.

ಇಂದು ಏಳನೆಯ ವಿಶ್ವ ಹೆಪಟೈಟಿಸ್ ದಿನ.
ಒಂದು ವರದಿಯ ಪ್ರಕಾರ ಭಾರತದಲ್ಲಿ ೪ ಕೋಟಿ ಹೆಪಟೈಟಿಸ್ ರೋಗಿಗಳಿದ್ದಾರೆ.
ಹೆಪಟೈಟಿಸ್ ಸಂಭವನೀಯ ಮಾರಣಾನ್ತಕ ರೋಗ. ಆದ್ರೆ ಯಾವುದೇ ರೋಗ ಲಕ್ಷಣಗಳಿರಬೇಕೆಂದಿಲ್ಲ.

ಈ ದಿನದ "ಆಚರಣೆ"ಯ ಉದ್ದೇಶ- ರೋಗದ ಬಗ್ಗೆ ಸಾರ್ವತ್ರಿಕ ಅರಿವು ಹೆಚ್ಚಿಸುವದು, ಅದನ್ನು ತಡೆಗಟ್ಟುವ, ಪತ್ತೆ ಹಚ್ಚುವ ಹಾಗೂ ಉಪಚಾರದ ಬಗ್ಗೆ ಜನರಿಗೆ ತಿಳಿವಳಿಕೆ ಕೊಡುವದು.
ಸಂಕ್ಷಿಪ್ತ ತಿಳುವಳಿಕೆ ಕೆಳಗಡೆ ಕೊಡಲಾಗಿದೆ.

ಹೆಪಟೈಟಿಸ್ ನಿಂದ ಲಿವರ್ ಗೆ ಲುಕ್ಸಾನು ಆಗಬಹುದು ಅಥವಾ ಅದಕ್ಕೆ ಕ್ಯಾನ್ಸರ್ ಆಗಬಹುದು.
ತಿಳಿದಿರಲಿ-ಹೆಪಟೈಟಿಸ್ B ವೈರಸ್, (ಏಡ್ಸ್ ಗೆ ಕಾರಣವಾಗುವ ವೈರಸ್-) HIV ಗಿಂತ ನೂರು ಪಟ್ಟು ಹೆಚ್ಚು ಸಾಂಕ್ರಾಮಿಕ !

ಹೆಪಟೈಟಿಸ್ A ಹಾಗೂ E ಗಳಿಂದ ಹೀಗೆ ರಕ್ಷಣೆ ಪಡೆಯಬಹುದು:-
-ಅಡಿಗೆ/ಊಟ ಮಾಡುವ ಮೊದಲು ಹಾಗೂ ಶೌಚದ ನಂತರ ಕೈ ತೊಳೆಯಬೇಕು.
-ಸಾಧ್ಯವಿದ್ದಷ್ಟು ಆಗಲೇ ಮಾಡಿದ ಅಡಿಗೆ ಊಟ ಮಾಡಬೇಕು.
-ಸ್ವಚ್ಛ ಇಲ್ಲದ, ಮುಚ್ಚಿ ಇಡದ ಕಚ್ಚಾ ತರಕಾರಿ ಹಾಗೂ ಸುಲಿದ ಹಣ್ಣುಗಳನ್ನು ತಿನ್ನಬಾರದು.
-ಶುದ್ಧ ನೀರು ಕುಡಿಯಬೇಕು.
-ಹೆಪಟೈಟಿಸ್ A ವಿರುದ್ಧ ನಿರೋಧಕ ಚುಚ್ಚುಮದ್ದು ಪಡೆಯಬೇಕು ಆದರೆ ಇದು ಹೆಪಟೈಟಿಸ್   E ಯನ್ನು ನಿರೋಧಿಸುವದಿಲ್ಲ.

ಹೆಪಟೈಟಿಸ್ B  ಹಾಗೂ C ಗಳಿಂದ ಹೀಗೆ ರಕ್ಷಣೆ ಪಡೆಯಬಹುದು:-
-ಹೆಪಟೈಟಿಸ್ Bವಿರುದ್ಧ ನಿರೋಧಕ ಚುಚ್ಚುಮದ್ದು ಪಡೆಯಬೇಕು ಆದರೆ ಇದು ಹೆಪಟೈಟಿಸ್ C ಯನ್ನು ನಿರೋಧಿಸುವದಿಲ್ಲ.
-ಅಸುರಕ್ಷಿತ ಸಂಭೋಗದಿಂದ ದೂರ ಇರಬೇಕು.
-ಟೂತ್ ಬ್ರಷ್, ರೇಜರ್, ನೈಲ್-ಕಟರ್ ಹಂಚಿಕೊಳ್ಳಬಾರದು.
-ಟಾಟೂ ಮಾಡಿಸಿಕೊಳ್ಳುವಾಗ ಅಥವಾ ಮೂಗು/ಕಿವಿ ಇತ್ಯಾದಿ ಕಡೆ ಚುಚ್ಚಿಸಿಕೊಳ್ಳುವಾಗ ಆ ಉಪಕರಣಗಳನ್ನು ಮೊದಲೇ ಸರಿಯಾಗಿ ಸ್ಟರ್ಲೈಜ್ ಮಾಡಿದ್ದನ್ನು ಖಚಿತ ಪಡಿಸಿಕೊಳ್ಳಬೇಕು.
-ಡ್ರಗ್ಸ್,ಸೂಜಿಗಳು,ಸಿರಿಂಜ್ ಗಳನ್ನು ಹಂಚಿಕೊಳ್ಳಬಾರದು.

ಹೆಪಟೈಟಿಸ್ ಉಪಚಾರ-
-ಹೆಪಟೈಟಿಸ್ A ಹಾಗೂ E ಗಳಿಗೆ ಔಷದಿಯಿಲ್ಲ. ಲಕ್ಷಣಗಳನ್ನು ಹಾಗೂ ಏನಾದರೂ ಜಟಿಲತೆ ಆದಾಗ ಅವಕ್ಕೆ ಉಪಚಾರ ಕೊಡಬೇಕು.
-ಹೆಪಟೈಟಿಸ್ B ಯನ್ನು ಕ್ಯೂರ್ ಮಾಡಲು ಸಾಧ್ಯವಿಲ್ಲ. ಕ್ರಾನಿಕ್ ಹೆಪಟೈಟಿಸ್ B ಯನ್ನು ಇಂಟರ್ಫೆರೋನ್ ಹಾಗೂ ವೈರಸ್-ವಿರೋಧಿ ಔಷಧಿಗಳಿಂದ ಉಪಚರಿಸಬಹುದು.
-ಹೆಪಟೈಟಿಸ್ C ಯನ್ನು ಉಪಚರಿಸಲು ಔಷಧಿಗಳು ಲಭ್ಯ
ಎಲ್ಲ ಉಪಚಾರಗಳಲ್ಲಿ ರೋಗಿಯ ಸಾಮಾನ್ಯ ಸ್ಥಿತಿಯನ್ನು ಕಾಪಾಡಿಕೊಂಡು ಬರಬೇಕು.
(ಫೋಟೋ ಹಾಗೂ ರೆಫರೆನ್ಸ್ ಅಂತರ್ಜಾಲದಿಂದ)